Bengaluru

ACTOR CHETHAN ARREST: ಆಕ್ಷೇಪಾರ್ಹ ಟ್ವೀಟ್‌; ನಟ ಚೇತನ್‌ಗೆ 14 ದಿನ ನ್ಯಾಯಾಂಗ ಬಂಧನ

ಬೆಂಗಳೂರು(BANGALORE): ನ್ಯಾಯಮೂರ್ತಿಗಳ ಬಗ್ಗೆ ಆಕ್ಷೇಪಾರ್ಹ ಟ್ವೀಟ್‌ ಮಾಡಿದ ಆರೋಪದ ಮೇಲೆ ನಟ ಚೇತನ್‌ (ACTOR CHETHAN) ಅವರನ್ನು ನಿನ್ನೆ ಬಂಧಿಸಲಾಗಿದ್ದು, ಅವರನ್ನು ಕೋರ್ಟ್‌ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ವಿವಾದಾತ್ಮಕ ಟ್ವೀಟ್‌ ಮಾಡಿದ್ದಾರೆಂಬ ಕಾರಣಕ್ಕೆ ನಿನ್ನೆ ಸಂಜೆ ಶೇಷಾದ್ರಿಪುರಂ ಪೊಲೀಸರು (SHESHADRIPURAM POLICE STATION) ನಟ ಚೇತನ್‌ ಅವರ ಮನೆಗ ಹೋಗಿ ಬಂಧಿಸಿದ್ದರು.
ನಂತರ ಪೊಲೀಸರು ಬೆಂಗಳೂರಿನ 8ನೇ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಿದ್ದು, ಕೋರ್ಟ್‌ ಅವರಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ. ಇನ್ನು ನಟ ಚೇತನ್‌ಗೆ ಜಾಮೀನು ನೀಡಬೇಕೆಂದು ಚೇತನ್‌ ಪರ ವಕೀಲ ಕೆ.ಬಾಲನ್‌ ಅರ್ಜಿ ಸಲ್ಲಿಸಿದ್ದಾರೆ. ಇಂದು ಆಕ್ಷೇಪಣೆ ಸಲ್ಲಿಸಲು ಪೊಲೀಸರಿಗೆ ಸೂಚಿಸಲಾಗಿದೆ. ಇಂದು ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ.

Share Post