ಕಾಂಗ್ರೆಸ್ ಯಾರ ಪರ ಅನ್ನೋದನ್ನು ಮೊದಲು ನಿರ್ಧರಿಸಲಿ-ಅಶೋಕ್
ಬೆಂಗಳೂರು: ಶಾಲಾ-ಕಾಲೇಜುಗಳಲ್ಲಿ ಭುಗಿಲೆದ್ದಿರುವ ಹಿಜಾಬ್ ವಿಚಾರವಾಗಿ ಕಂದಅಯ ಸಚಿವ ಆರ್.ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ. ವಿಧಾನಸೌಧದಲ್ಲಿ ಮಾತಣಾಡುತ್ತಾ ಇದರ ಹಿಂದೆ ಕಾಂಗ್ರೆಸ್ ಷಡ್ಯಂತ್ರವಿದೆ ಎಂದು ಆರೋಪ ಮಾಡಿದ್ದಾರೆ. ಯಾಕಂದ್ರೆ ಕಾಂಗ್ರೆಸ್‌ನ ಒಂದು ವರ್ಗ ಹಿಜಾಬ್‌ಗೆ ಪ್ರೇರಣೆ ನೀಡ್ತಿದ್ರೆ, ಇನ್ನೊಂದು ವರ್ಗ ಎರಡೂ ಕಡೆ ಮಾತನಾಡುತ್ತಿದ್ದಾರೆ. ರಾಜಕೀಯ ವಿಚಾರವಾಗಿ ಎರಡೂ ಕಡೆ ಇದ್ದಾರೆ.
ಈ ಬಗ್ಗೆ ಮೊದಲು ಕಾಂಗ್ರೆಸ್ ಯಾರ ಪರವಾಗಿ ಇದ್ದಾರೆಂದು ಸ್ಪಷ್ಟನೆ ನೀಡಬೇಕು. ಕಾಂಗ್ರೆಸ್ ಪಕ್ಷ ಎರಡೂ ಕಡೆ ಇರುವುದು ಒಳ್ಳೆಯದಲ್ಲ. ಇದು ದೇಶಕ್ಕೆ ಮಾರಕವಾಗಿದೆ. ಎವರಲ್ಲಿಯೇ ಅವರಿಗೆ ನಂಬಿಕೆ ಇಲ್ಲದೆ ಎರೆಡೆರಡು ಹೇಳಿಕೆಗಳನ್ನು ನೀಡ್ತಿದ್ದಾರೆ. ರಾಜ್ಯದಲ್ಲಿ ಮತೀಯ ಕಲಹ ಶುರುವಾಗಲು ಅವರ ಹೇಳಿಕೆಗಳೇ ಕಾರಣ. ಗೊಂದಲ ಸೃಷ್ಟಿಸುವ ಹೇಳಿಕೆಗಳಿಂದ ವಿದ್ಯಾರ್ಥಿಗಳನ್ನು ಎತ್ತಿಕಟ್ಟುವ ಕೆಲಸ ಮಾಡ್ತಿದ್ದಾರೆಂದು ವಿಧಾನಸೌಧದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.