Districts

ಎಲ್ಲಾ ಶಾಲಾ-ಕಾಲೇಜುಗಳಿಗೆ ಪೊಲೀಸರಿಂದ ರಕ್ಷಣೆ-ಆರಗ ಜ್ಞಾನೇಂದ್ರ

ಶಿವಮೊಗ್ಗ: ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ ವಿವಾದ ಕಿಚ್ಚು ಹೊತ್ತಿ ಉರಿಯುತ್ತಿದೆ. ಒಂದು ಕಾಲೇಜಿನಲ್ಲಿ ಶುರುವಾದ ಗಲಾಟೆ ಈಗ ಇಡೀ ರಾಜ್ಯ ವ್ಯಾಪಿಸುವ ಆತಂಕದಲ್ಲಿದೆ. ಸರ್ಕಾರ ಯೂನಿಫಾರ್ಮ್‌ ಕಡ್ಡಾಯ ಎಂದು ಘೋಷಣೆ ಮಾಡಿದ್ರೂ ಕೂಡ ಸರ್ಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡ್ತಿಲ್ಲ.  ಬದಲಿಗೆ ಎಲ್ಲಾ ಕಡೆ ಧರಣಿ, ಪ್ರತಿಭಟನೆಗಳನ್ನ ನಡೆಸುತ್ತಿದ್ದಾರೆ. ಈ ವಿಚಾರದ ಬಗ್ಗೆ ಗೃಹ ಸಚಿವ ಆರ್ಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

ರಾಜ್ಯದ ಎಲ್ಲಾ ಶಾಲೆಗಳಿಗೂ ನಮ್ಮ ಪೊಲೀಸರು ರಕ್ಷಣೆ ನೀಡ್ತಾರೆ. ಹಿಜಾಬ್‌ ಮತ್ತು ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳು ಕಾಲೇಜಿಗೆ ಬರುವಂತಿಲ್ಲ.ಸಮವಸ್ತ್ರ ಧರಿಸಿ ಸಮಾನತೆಯ ಸಂಕೇತವನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕಿದೆ. ಹಿಜಾಬ್‌ ವಿವಾದದ ಹಿಂದೆ ಕಾಣದ ಶಕ್ತಿಯೊಂದು ಕೆಲಸ ಮಾಡ್ತಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಪೊಲೀಸ್‌ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದರು.

ಕೊರೊನಾ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಮಕ್ಕಳಿಗೆ ಶಿಕ್ಷಣ ಹಾಳಾಗಿದೆ. ಈ ವರ್ಷ ಕೂಡಾ ಮಕ್ಕಳ ಭವಿಷ್ಯ ಹಾಳಾಗಬಾರದು ಹೀಗಾಗಿ ಯಾರೂ ಕೂಡ ಮಕ್ಕಳನ್ನು ಎತ್ತಿಕಟ್ಟಬಾರದು ಯಾವುದೇ ಪ್ರಚೋದನೆಗೆ ವಿದ್ಯಾರ್ಥಿಗಳು ಒಳಗಾಗಬಾರದು ಎಂದು ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

Share Post