ಉಡುಪಿ, ಮಂಗಳೂರನ್ನು ತಾಲಿಬಾನ್ ಆಗಲು ಬಿಡಲ್ಲ:ಸುನೀಲ್ ಕುಮಾರ್
ಬೆಂಗಳೂರು: ಹಿಜಾಬ್, ಸಮವಸ್ತ್ರ ವಿವಾದ ಉಡುಪಿ-ಕುಂದಾಪುರದಲ್ಲಿ ಕಾಡ್ಗಿಚ್ಚಿನಂತೆ ಹರಡಿದೆ. ಈ ವಿಚಾರವಾಗಿ ಇಂಧನ ಸಚಿವ ಸುನೀಲ್ ಕುಮಾರ್ ಮಾತನಾಡಿ, ಮತೀಯ ಕೆಲಸ ವಿಜೃಂಭಿಸಲು ಕೆಲ ಸಂಘಟನೆಗಳು ಹೀಗೆ ಮಾಡ್ತಿದಾರೆ ಎಂದು ಆರೋಪಿಸಿದ್ದಾರೆ. ಶಿಕ್ಷಣ, ಯುವಕರ ಮಧ್ಯೆ ವಿಷಬೀಜ ಬಿತ್ತುವ ಕೆಲಸ ಬೇಡ ಎಂದಿದ್ದಾರೆ. ಸಿದ್ದರಾಮಯ್ಯ ಎಲ್ಲ ಸಮಯದಲ್ಲೂ ಮತೀಯತೆ ಯೋಚಿಸ್ತಾರೆ. ಜಾತಿಗಳ ನಡುವೆ ವಿಷಬೀಜ ಬಿತ್ತಿರುವುದೇ ಸಿದ್ದರಾಮಯ್ಯ ಅದರ ಮುಂದುವರಿದ ಭಾಗವೇ ಇದು ಎಂದು ಸುನೀಲ್ ಕುಮಾರ್ ತಿಳಿಸಿದ್ದಾರೆ.
ಇದರ ಹಿಂದೆ ಇಸ್ಲಾಂ ಸಂಘಟನೆ ಇದ್ಯಾ ಅಥವಾ ಸಿದ್ದರಾಮಯ್ಯ ಖಾದರ್ ಕೈವಾಡ ಇದ್ಯಾ ಎಂಬ ಅನುಮಾನ ಇದೆ ವ್ಯಕ್ತವಾಗಿದೆ. ಈ ಹಿಜಾಬ್ ವಿವಾದದ ಹಿಂದೆ ಒಂದು ದೊಡ್ಡ ಹುನ್ನಾರವೇ ಇದೆ ಸಮವಸ್ತ್ರ ಎಂಬುದು ನಿಯಮವಲ್ಲ, ಅದೊಂದು ಸಂಪ್ರದಾಯ ಎಲ್ಲರಿಗೂ ಒಂದೇ ಸಂಸ್ಕಾರ ನೀಡಬೇಕು ಎಂಬ ಉದ್ದೇಶದಿಂದ ಮಾಡಿದ್ದು, ಉಡುಪಿ, ಮಂಗಳೂರು, ಕರ್ನಾಟಕವನ್ನು ತಾಲಿಬಾನ್ ಮಾಡಲು ಬಿಡಲ್ಲ, ಬಡ ವಿದ್ಯಾರ್ಥಿಗಳು ಕೋರ್ಟ್‌ಗೆ ಹೋಗ್ತಾರೆ ಅಂದ್ರೆ ಏನು ಸುಮ್ಮನೇನಾ..?ಇದರ ಹಿಂದೆ ಸಂಘಟನೆಯ ಕೈವಾಡ ಇರುವುದು ಖಚಿತ ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.