Crime

SHOCKING VIDEO; 4 ಮಕ್ಕಳಿಗೆ ಹಗ್ಗ ಕಟ್ಟಿ ಹಿಂಸಿಸಿ ವಿಕೃತಿ..!

ಮಿಡ್ನಾಪುರ್‌: ಪಶ್ಚಿಮ ಬಂಗಾಳದ ಮಿಡ್ನಾಪುರದ ಬಳಿ ಪೈಶಾಚಿಕ ಕೃತ್ಯವೊಂದು ನಡೆದಿದೆ. ಇಲ್ಲಿ ಜವಾ ಎಂಬ ಗ್ರಾಮದಲ್ಲಿ ನಾಲ್ಕು ಮಕ್ಕಳನ್ನು ಕಟ್ಟಿ ಹಾಕಿರುವ ವ್ಯಕ್ತಿಯೊಬ್ಬ ಹಿಗ್ಗಾಮುಗ್ಗಾ ಹೊಡೆದಿದ್ದಾನೆ. ಹಗ್ಗದಿಂದ ಕೈಕಾಲು ಕಟ್ಟಿ, ಉರುಳಾಡಿಸಿ ಹೊಡೆಯಲಾಗಿದೆ. ಸಾಯುವ ರೀತಿಯಲ್ಲಿ ಮಕ್ಕಳನ್ನು ಹಿಂಸಿಸಲಾಗಿದೆ. ಇದರ ವಿಡಿಯೋ ವೈರಲ್‌ ಆಗಿದ್ದು, ಎಲ್ಲೆಡೆ ಆಕ್ರೋಶಗಳು ವ್ಯಕ್ತವಾಗುತ್ತಿವೆ.

ತೋಟದ ಬಳಿ ಮಕ್ಕಳನ್ನು ಕಟ್ಟಿ ಹಾಕಿ ವಿಕೃತಿ ಮೆರೆಯಲಾಗಿದೆ. ಸದ್ಯ ತೀವ್ರವಾಗಿ ಗಾಯಗೊಂಡಿರುವ ಮಕ್ಕಳನ್ನು ಗಾರ್ಬೆಟಾದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಸಬಂಧ ಗಾರ್ಬೆಟಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಾಗಿ ಹುಡುಕಾಟ ನಡೆದಿದೆ.

 

Share Post