Politics

ಕೈತಪ್ಪಿದ ಪರಿಷತ್ ವಿಪಕ್ಷ ನಾಯಕ ಸ್ಥಾನ; ಇಬ್ರಾಹಿಂ ಕೋಪಕ್ಕೆ ಇದೇ ಕಾರಣವಾ..?

ಬೆಂಗಳೂರು: ಕಾಂಗ್ರೆಸ್‌ನ ಹಿರಿಯ ನಾಯಕರಲ್ಲೊಬ್ಬರಾದ ಸಿ.ಎಂ.ಇಬ್ರಾಹಿಂ ಅವರು ಹಲವು ತಿಂಗಳಿಂದ ಕಾಂಗ್ರೆಸ್‌ನಿಂದ ಕೊಂಚ ಅಂತರ ಕಾಪಾಡಿಕೊಂಡಿದ್ದರು. ಹೀಗಿದ್ದರೂ ಕಾಂಗ್ರೆಸ್‌ ಬಿಟ್ಟುಹೋಗುವ ಬಗ್ಗೆ ಅರ್ಧ ಮನಸ್ಸಿನಲ್ಲಿದ್ದರು. ಈ ನಡುವೆ ಪರಿಷತ್‌ನಲ್ಲಿ ಕಾಂಗ್ರೆಸ್‌ ವಿಪಕ್ಷ ನಾಯಕನ ಸ್ಥಾನ ಸಿಗುತ್ತದೆಂಬ ವಿಶ್ವಾಸದಲ್ಲಿದ್ದರು. ಆದ್ರೆ ಆ ಸ್ಥಾನ ಕೈತಪ್ಪಿದೆ. ಇದ್ರಿಂದ ಬೇಸತ್ತು ಇಬ್ರಾಹಿಂ ಕಾಂಗ್ರೆಸ್‌ ಬಿಡುವ ತೀರ್ಮಾನಕ್ಕೆ ಬಂದಿದ್ದಾರೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್‌ನ ಪರಿಷತ್‌ ಸದಸ್ಯರಲ್ಲಿ ಸಿ.ಎಂ.ಇಬ್ರಾಹಿಂ ಹಿರಿಯರಿದ್ದರು. ಜೊತೆಗೆ ರಾಜಕೀಯ ಅನುಭವಿಗಳೂ ಆಗಿದ್ದಾರೆ. ಆದ್ರೆ, ಪರಿಷತ್‌ ವಿಪಕ್ಷ ನಾಯಕನ ಸ್ಥಾನ ಅವರಿಗೆ ಕೊಟ್ಟಿಲ್ಲ. ಬದಲಾಗಿ, ಬಿ.ಕೆ.ಹರಿಪ್ರಸಾದ್‌ಗೆ ಆ ಸ್ಥಾನ ಒಲಿದುಬಂದಿದೆ. ಇದ್ರಿಂದಾಗಿ ಸಿ.ಎಂ.ಇಬ್ರಾಹಿಂ ಅವರ ಕನಸು ಭಗ್ನವಾದಂತಾಗಿದೆ.  ಇದ್ರಿಂದ ಬೇಸತ್ತಿರುವ ಸಿ.ಎಂ.ಇಬ್ರಾಹಿಂ ಪಕ್ಷ ಬಿಡುವ ತೀರ್ಮಾನಕ್ಕೆ ಬಂದಿದ್ದಾರೆ. ಅವರು ಮತ್ತೆ ಜೆಡಿಎಸ್‌ ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Share Post