Bengaluru

ಪ್ರೌಢಶಿಕ್ಷಣ ಮಂಡಳಿಯಿಂದ SSLC ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಕೊರೊನಾ ಮೂರನೇ ಅಲೆ, ರೂಪಾಂತರಿ ವೈರಸ್‌ ಓಮಿಕ್ರಾನ್‌ ನಡುವೆಯೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ಸರ್ಕಾರ ನಿರ್ಧರಿಸಿದೆ. ಈ ಮೊದಲು ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದ್ದ ಪ್ರೌಢಶಿಕ್ಷಣ  ಮಂಡಳಿ ಇಂದು ಅಂತಿಮ ಪರೀಕ್ಷಾ ದಿನಾಂಕವನ್ನು ಘೋಷಣೆ ಮಾಡಿದೆ. ಮಾರ್ಚ್ 28ರಿಂದ ಏಪ್ರಿಲ್ 11ರವರೆಗೆ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದೆ.

ಮಾರ್ಚ್ 28 – ಪ್ರಥಮ ಭಾಷೆ
ಮಾರ್ಚ್ 30 – ದ್ವಿತೀಯ ಭಾಷೆ,
ಏಪ್ರಿಲ್ 1 – ಅರ್ಥ ಶಾಸ್ತ್ರ, ಕೋರ್ ಸಬ್ಜೆಕ್ಟ್,
ಏಪ್ರಿಲ್ 4 –  ಗಣಿತ, ಸಮಾಜಶಾಸ್ತ್ರ,
ಏಪ್ರಿಲ್ 6 – ಸಮಾಜ ವಿಜ್ಞಾನ,
ಏಪ್ರಿಲ್‌ 8- ತೃತೀಯ ಭಾಷೆ,
ಏಪ್ರಿಲ್‌ 11 ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ/ ಹಿಂದೂಸ್ತಾನಿ ಸಂಗೀತ ಪರೀಕ್ಷೆಗಳು ನಡೆಯಲಿವೆ.

ಪರೀಕ್ಷಾ ಸಮಯ ಬೆಳಗ್ಗೆ 10.30ರಿಂದ ಮಧ್ಯಾಹ್ನ 1.45. ಪ್ರತಿ ವಿಷಯಕ್ಕೂ ಪ್ರಶ್ನೆ ಪತ್ರಿಕೆ ಓದಲು 15 ನಿಮಿಷ ಕಾಲಾವಕಾಶ ನೀಡಲಾಗಿದೆ. ಕೊರೊನಾ ಹಿನ್ನೆಲೆ ಎಲ್ಲಾ ಮಕ್ಕಳಿಗೂ ಈಗಾಗಲೇ ವ್ಯಾಕ್ಸಿನ್‌ ನೀಡಲಾಗಿದೆ. ಮಾಸ್ಕ್‌, ಸಾಮಾಜಿಕ ಅಂತರ ಪಾಳನೆ ಎಲ್ಲಾ ಗಮನದಲ್ಲಿಟ್ಟುಕೊಂಡು ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಸ್ಯಾನಿಟೈಸ್‌ ಮತ್ತು ಮುಂಜಾಗ್ರತಾ ಕ್ರಮಗಳನ್ನು ಶಿಕ್ಷಣ ಇಲಾಖೆ ತೆಗೆದುಕೊಳ್ಳುವುದಾಗಿ ತಿಳಿಸಿದೆ.

Share Post