National

ಸಿಮೆಂಟ್‌ ಸಾಗಿಸುತ್ತಿದ್ದ ಗೂಡ್ಸ್‌ ಟ್ರೈನ್‌ ಪಲ್ಟಿ

ಲಕ್ನೌ : ಸಿಮೆಂಟ್‌ ಹೊತ್ತಿಕೊಂಡು ಆಗ್ರಾದಿಂದ ದೆಹಲಿಗೆ ಹೊರಟ್ಟಿದ್ದ ರೈಲು ಅಪಘಾತಕ್ಕೀಡಾಗಿದೆ. ಗೂಡ್ಸ್‌ ರೈಲು ಹಳಿ ತಪ್ಪಿದೆ.

ರೇಲ್ವೈ ಹಳಿ ಹಾಳಾಗಿದ್ದ ಕಾರಣ ಗೂಡ್ಸ್‌ ರೈಲಿನ ನಾಲ್ಕು ಬೋಗಿಗಳು ಪಲ್ಟಿಯಾಗಿದೆ. ಇಂದು ಮುಂಜಾನೆ ಈ ಘಟನೆ ಸಂಭವಿಸಿದೆ. ಸ್ತಳದಲ್ಲಿ ಜೆಸಿಬಿ ಹಾಗೂ ರೈಲ್ವೆ ತಂಡದಿಂದ ದುರಸ್ತಿ ಕಾರ್ಯ ಶುರುವಾಗಿದೆ. ರೈಲ್ವೆ ಅಧಿಕಾರಿಗಳು ಮತ್ತು ಸಿಆರ್‌ಪಿಎಫ್‌ ತಂಡ ಸ್ಥಳಕ್ಕೆ ಧಾವಿಸಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದೆ.

ಸಿಮೆಂಟ್‌ ತುಂಬಿದ್ದ ಬೋಗಿಗಳನ್ನು ಬೇರ್ಪಡಿಸಲು 300ಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದಾರೆ. ಈ ಮಾರ್ಗದಲ್ಲಿ ಸಂಚರಿಸಬೇಕಿದ್ದ ಟ್ರೈನ್‌ಗಳ ಮಾರ್ಗವನ್ನು ಬದಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದೆಹಲಿ ಮತ್ತು ಮಥುರಾ ನಡುವಿನ ರೈಲು ಸಂಚಾರವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ.

Share Post