National

ದೆಹಲಿಯಲ್ಲಿ ವಾಯುಗುಣಮಟ್ಟ ಅತ್ಯಂತ ಕಳಪೆ

ನವದೆಹಲಿ: ದೆಹಲಿಯಲ್ಲಿ ವಾಯು ಗುಣಮಟ್ಟ ಮತ್ತೆ ಕಳಪೆಯಾಗಿದೆ. ಹವಾಮಾನ ಮುನ್ಸೂಚನೆ ಹಾಗೂ ಸಂಶೋಧನಾ ತಂಡದ ವರದಿಯಂತೆ ಇಂದು ದೆಹಲಿಯಲ್ಲಿ ವಾಯುಗುಣಮಟ್ಟ 353AQI ದಾಖಲಾಗಿದೆ. ಇದು ಅತ್ಯಂತ ಕಳಪೆ ಗುಣಮಟ್ಟ ಎಂದು ಅಧಿಕಾರಿಗಳು ಹೇಳಿದ್ದಾರೆ.

 

ಇನ್ನು ದೆಹಲಿಯಲ್ಲಿ ಮಂಜುಮುಸುಕಿದ ವಾತಾವರಣ ಮುಂದುವರೆದಿದೆ. ಬೆಳಗ್ಗೆ ಹತ್ತು ಗಂಟೆಯಾದರೂ ದೆಹಲಿಯ ರಸ್ತೆಗಳಲ್ಲಿ ಏನೂ ಕಾಣದಂತಹ ಪರಿಸ್ಥಿತಿ. ಆ ಹಂತಕ್ಕೆ ದೆಹಲಿಯಲ್ಲಿ ಮಂಜು ಮಸುಕಿನದ ವಾತಾವರಣವಿದೆ.

Share Post