National

ಸೂರತ್‌ನಲ್ಲಿ ಭಾರಿ ಬೆಂಕಿ ದುರಂತ; ಡೈಯಿಂಗ್‌ ಮಿಲ್‌ ಬೆಂಕಿಗಾಹುತಿ..!

ಸೂರತ್‌: ಸೂರತ್‌ನಲ್ಲಿ ಇವತ್ತೂ ಕೂಡಾ ದೊಡ್ಡ ಬೆಂಕಿ ದುರಂತ ಸಂಭವಿಸಿದೆ. ಇಲ್ಲಿನ ಪಾಲ್ಸಾನಾ ಬಳಿಯ ಸೌಮ್ಯಾ ಡೈಯಿಂಗ್‌ ಮಿಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇಡೀ ಕಾರ್ಖಾನೆ ಬೆಂಕಿಗಾಹುತಿಯಾಗಿದೆ.

ಬೆಳಗಿನ ಜಾವ 3.30ರ ಸುಮಾರಿಗೆ ಈ ದುರಂತ ಸಂಭವಿಸಿದೆ. ಕಾರ್ಖಾನೆಯಲ್ಲಿ ಎಲ್ಲಾ ಸಿಬ್ಬಂದಿಯನ್ನೂ ರಕ್ಷಣೆ ಮಾಡಲಾಗಿದೆ. ಕಾರ್ಖಾನೆಯಲ್ಲಿದ್ದ ಎರಡು ಗ್ಯಾಸ್‌ ಬಾಟೆಲ್‌ಗಳು ಸ್ಫೋಟಗೊಂಡಿದ್ದರಿಂದ ಈ ದುರಂತ ನಡೆದಿದೆ ಎಂದು ಹೇಳಲಾಗುತ್ತಿದೆ.

ವಿಷಯ ತಿಳಿಯುತ್ತಿದ್ದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿದರು. ಸುಮಾರು ನಾಲ್ಕು ಗಂಟೆಗೂ ಹೆಚ್ಚು ಕಾಲ ಹರಸಾಹಸಪಟ್ಟು ಬೆಂಕಿಯನ್ನು ನಂದಿಸಿದರು.

 

Share Post