Crime

ಎಟಿಎಂ ಯಂತ್ರ ಒಡೆದು ಲೂಟಿ; ದಿಮಾರಿಯಲ್ಲಿ ಕಳ್ಳರ ಕೈಚಳಕ

ಮಿಡ್ನಾಪುರ: ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯ ತಮ್ಲಕ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ದಿಮಾರಿ ಬಜಾರ್‌ನಲ್ಲಿ ಎಟಿಎಂ ಲೂಟಿ ಮಾಡಲಾಗಿದೆ. ಇಲ್ಲಿ ಹಲ್ಡಿಯಾ ಮಚೇಡಾ ಸ್ಟೇಟ್‌ ರಸ್ತೆಯ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ನ ಎಟಿಎಂನ್ನು ಒಡೆದು ಕಳ್ಳರು ಅದರಲ್ಲಿದ್ದ ಎಲ್ಲಾ ಹಣವನ್ನು ದೋಚಿದ್ದಾರೆ.

ಕಳೆದ ರಾತ್ರಿ ದುಷ್ಕರ್ಮಿಗಳು ಈ ಕೃತ್ಯ ಎಸಗಿ ಪರಾರಿಯಾಗಿದ್ದಾರೆ. ಮೊದಲು ಎಟಿಎಂನಲ್ಲಿದ್ದ ಸಿಸಿಟಿವಿ ಕ್ಯಾಮರಾಗಳಿಗೆ ಕೆಂಪು ಬಣ್ಣ ಬಳಿದು, ಅನಂತರ ಎಟಿಎಂ ಯಂತ್ರವನ್ನು ಒಡೆದಿದ್ದಾರೆ. ಸಲಿಕೆ ಹಾಗೂ ಸುತ್ತಿಗೆ ಬಳಸಿ ಎಟಿಎಂ ಯಂತ್ರಗಳನ್ನು ಒಡೆಯಲಾಗಿದ್ದು, ಅದ್ರರಲ್ಲಿದ್ದ ಲಕ್ಷಾಂತರ ರೂಪಾಯಿ ಹಣವನ್ನು ದೋಚಲಾಗಿದೆ.

Share Post