ಕೋಲಾರ ಕಾಂಗ್ರೆಸ್ ನಾಯಕರ ಹೈಡ್ರಾಮಾ; ಇದರ ಹಿಂದೆ ಯಾರಿದ್ದಾರೆ..?
ಬೆಂಗಳೂರು; ಕೋಲಾರ ಲೋಕಸಭಾ ಕ್ಷೇತ್ರ.. ಇಲ್ಲಿ ಇನ್ನೂ ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಾಗಿಲ್ಲ.. ಸಚಿವ ಕೆ.ಹೆಚ್.ಮುನಿಯಪ್ಪ ಅವರ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ಆಗೇ ಬಿಟ್ಟಿದೆ ಎಂಬ ಒಂದು ಸುದ್ದಿ ಹಲವು ಕಾಂಗ್ರೆಸ್ ಮುಖಂಡರನ್ನು ಕೆರಳಿಸಿದೆ.. ಮೂವರು ಶಾಸಕರು ಶಾಸಕರು ಹಾಗೂ ಇಬ್ಬರು ಪರಿಷತ್ ಸದಸ್ಯರು ರಾಜೀನಾಮೆಗೂ ಮುಂದಾಗಿದ್ದಾರೆ.. ಅಭ್ಯರ್ಥಿ ಘೋಷಣೆಗೂ ಮುಂಚೆಯೇ ಇಂತಹದ್ದೊಂದು ತೀರ್ಮಾನ ತೆಗೆದುಕೊಳ್ಳುವುದು, ಹೈಡ್ರಾಮಾಕ್ಕೆ ಕಾರಣವಾಗುವುದು ಕಡಿಮೆ.. ಆದ್ರೆ, ಕೋಲಾರ ಶಾಸಕರ ಈ ಪ್ರಹಸನದ ಹಿಂದೆ ಒಬ್ಬ ದೊಡ್ಡ ನಾಯಕ ಇದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ…
ಇದನ್ನೂ ಓದಿ; ಬೆಂಗಳೂರು ನೀರಿನ ಸಮಸ್ಯೆಗೆ ಪರಿಹಾರ ಸೂಚಿಸಿದ ಮೆಗಾಸ್ಟಾರ್ ಚಿರಂಜೀವಿ!
ಶಾಸಕರಿಂದ ಯಾಕೆ ಈ ವಿರೋಧ..?
ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಸಚಿವ ಕೆ.ಹೆಚ್.ಮುನಿಯಪ್ಪ ಅವರು ತಮ್ಮ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ಕೇಳುತ್ತಿದ್ದಾರೆ.. ಆದ್ರೆ ಶಾಸಕರಾದ ಕೊತ್ತೂರು ಮಂಜುನಾಥ್, ನಂಜೇಗೌಡ ಹಾಗೂ ಸಚಿವ ಎಂ.ಸಿ.ಸುಧಾಕರ್ ಮತ್ತು ಪರಿಷತ್ ಸದಸ್ಯರಾದ ನಜೀರ್ ಅಹ್ಮದ್, ಅನಿಲ್ ಕುಮಾರ್ ಮುಂತಾದವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.. ಬಲಗೈ ಸಮುದಾಯದ ಮತಗಳು ಈ ಕ್ಷೇತ್ರದಲ್ಲಿ ಹೆಚ್ಚಿದ್ದಾರೆ.. ಹೀಗಾಗಿ ಬಲಗೈ ಸಮುದಾಯದವರಿಗೆ ಟಿಕೆಟ್ ನೀಡಬೇಕೆಂಬುದು ಇವರೆಲ್ಲರ ಆಗ್ರಹ.. ಆದ್ರೆ, ಹೈಕಮಾಂಡ್ ನಾಯಕರು ಮುನಿಯಪ್ಪ ಅಳಿಯನಿಗೆ ಟಿಕೆಟ್ ಕನ್ಫರ್ಮ್ ಮಾಡಿದ್ದಾರೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಶಾಸಕರು ಹೈಡ್ರಾಮಾ ಮಾಡಿದ್ದಾರೆ.. ಪರಿಷತ್ ಸದಸ್ಯರಾದ ನಜೀರ್ ಅಹ್ಮದ್, ಅನಿಲ್ ಕುಮಾರ್ ಅವರು ಸಭಾಪತಿ ಕೊಠಡಿಗೆ ಬಂದು ರಾಜೀನಾಮೆಗೆ ಮುಂದಾಗಿದ್ದರು.. ಈ ವೇಳೆ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್ ಶಾಸಕರ ಮನವೊಲಿಸಿದ್ದಾರೆ.. ರಾತ್ರಿಯವರೆಗೂ ಸಮಯ ತೆಗೆದುಕೊಂಡಿದ್ದಾರೆ.. ಹೀಗಾಗಿ ರಾಜೀನಾಮೆ ಮಾಡುವ ವಿಚಾರವನ್ನು ಮುಂದಕ್ಕೆ ಹಾಕಲಾಗಿದೆ.
ಇದನ್ನೂ ಓದಿ; ಕೋಲಾರ ಕಾಂಗ್ರೆಸ್ ಟಿಕೆಟ್ ಕಗ್ಗಂಟು; 5 ಕಾಂಗ್ರೆಸ್ ಶಾಸಕರ ರಾಜೀನಾಮೆ ಬೆದರಿಕೆ!
ಎಂ.ಸಿ.ಸುಧಾಕರ್, ರಮೇಶ್ಕುಮಾರ್ ಜೊತೆ ಭಿನ್ನಮತ;
ಶಾಸಕರು ಬಲಗೈ ಸಮುದಾಯಕ್ಕೆ ಟಿಕೆಟ್ ಕೊಡಬೇಕು ಎಂಬುದು ನಮ್ಮ ವಾದ ಎನ್ನುತ್ತಿದ್ದಾರೆ.. ಆದ್ರೆ ನಿಜ ವಿಚಾರ ಏನು ಅಂದ್ರೆ ಮುನಿಯಪ್ಪ ಅಳಿಯನಿಗೆ ಟಿಕೆಟ್ ತಪ್ಪಿಸುವುದೇ ಅವರಿಗೆ ಮುಖ್ಯ ಉದ್ದೇಶವಾಗಿದೆ.. ಯಾಕಂದ್ರೆ, ಕೆ.ಹೆಚ್.ಮುನಿಯಪ್ಪ ಅವರು, ಚಿಂತಾಮಣಿಯ ಎಂ.ಸಿ.ಸುಧಾಕರ್ ವಿರುದ್ಧ ದಶಕದ ಹಿಂದೆಯೇ ಕಿತ್ತಾಡಿಕೊಂಡಿದ್ದರು.. ಹೀಗಾಗಿ ಇಬ್ಬರ ನಡುವೆ ದೊಡ್ಡ ಕಂದಕ ಏರ್ಪಟ್ಟಿದೆ.. ಇದರ ನಡುವೆ ರಮೇಶ್ ಕುಮಾರ್ ಹಾಗೂ ಮುನಿಯಪ್ಪ ನಡುವಿನ ಸಂಬಂಧ ಕೂಡಾ ಹಳಸಿದೆ.. ಈ ಕಾರಣಕ್ಕಾಗಿ ಕೊತ್ತೂರು ಮಂಜುನಾಥ್ ಮುಂತಾದವರು ಕೂಡಾ ರಮೇಶ್ ಕುಮಾರ್ ಬಣದ ಜೊತೆ ಗುರುತಿಸಿಕೊಂಡಿದ್ದಾರೆ.. ಹೇಗಾದರೂ ಮಾಡಿ ಮುನಿಯಪ್ಪ ಅಳಿಯನಿಗೆ ಟಿಕೆಟ್ ತಪ್ಪಿಸಲು ಕಠಿಣ ನಿರ್ಧಾರ ಕೈಗೊಂಡಿದ್ದಾರೆ..
ಇದನ್ನೂ ಓದಿ; ಬೂದಿಯಲ್ಲಿ ಮುಚ್ಚಿಟ್ಟರೆ 6 ತಿಂಗಳವರೆಗೂ ಟೊಮ್ಯಾಟೋ ಫ್ರೆಶ್!
ಎಷ್ಟೇ ಭಿನ್ನಮತ ಇದ್ದರೂ ರಾಜೀನಾಮೆ ಸುಲಭವಲ್ಲ;
ಮೂವರು ಶಾಸಕರು ಹಾಗೂ ಇಬ್ಬರು ಪರಿಷತ್ ಸದಸ್ಯರು ರಾಜೀನಾಮೆಗೆ ಮುಂದಾಗಿದ್ದೇವೆ ಎಂದು ಹೇಳುತ್ತಿದ್ದಾರೆ.. ಆದ್ರೆ, ಈ ನಿರ್ಧಾರ ತೆಗೆದುಕೊಳ್ಳಬೇಕಾಗಿದ್ದು, ಟಿಕೆಟ್ ಘೋಷಣೆಯಾದ ನಂತರ.. ಅದಕ್ಕೂ ಮೊದಲೇ ಇಂತಹ ಹೈಡ್ರಾಮಾ ನಡೆದಿದೆ ಎಂದರೆ ಹೈಕಮಾಂಡ್ ಮಣಿಸುವುದೇ ಇದರ ಉದ್ದೇಶ.. ಇದರ ಹಿಂದೆ ಒಬ್ಬ ದೊಡ್ಡ ನಾಯಕ ಕೈವಾಡ ಇದೆ ಎಂದೇ ಎಲ್ಲರೂ ಭಾವಿಸುತ್ತಿದ್ದಾರೆ… ರಾಜ್ಯದ ಕೆಲ ನಾಯಕರ ಒತ್ತಡವನ್ನೂ ಲೆಕ್ಕಿಸದೇ ಕಾಂಗ್ರೆಸ್ ಹೈಕಮಾಂಡ್ ಮುನಿಯಪ್ಪ ಅಳಿಯನಿಗೆ ಟಿಕೆಟ್ ಕೊಡೋದಕ್ಕೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ.. ಈ ಕಾರಣದಿಂದಲೇ ದೊಡ್ಡ ನಾಯಕರೊಬ್ಬರ ಸೂಚನೆ ಮೇರೆಗೇ ಈ ಈ ಹೈಡ್ರಾಮಾ ನಡೆದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.. ಆದ್ರೆ ಇದರಲ್ಲಿ ಎಷ್ಟು ಸತ್ಯವಿದೆಯೋ ಗೊತ್ತಿಲ್ಲ.. ಆದ್ರೆ, ಟಿಕೆಟ್ ಘೋಷಣೆಗೂ ಮೊದಲೇ ನಡೆದ ಈ ಹೈಡ್ರಾಮಾದಿಂದಾಗಿ ಹೈಕಮಾಂಡ್ ಮನಸ್ಸು ಬದಲಿಸಲಿದೆ ಎಂದೇ ಹೇಳಲಾಗುತ್ತದೆ..
ಇದನ್ನೂ ಓದಿ; ಸಮುದ್ರದ ಉಪ್ಪು ನೀರಿಂದ ಚಲಿಸುತ್ತಂತೆ ಈ ಕಾರು!; ಹೊಸ ಆವಿಷ್ಕಾರ!